‌‌‌ನಿರಪರಾಧಿಗಳ ಮೇಲೆ ಗಲಭೆ ಪಿತೂರಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡನೆ

ನವದೆಹಲಿ

ಮಿಥ್ಯ ಆರೋಪ ಹೊರಿಸಿ ನಿರಪರಾಧಿಗಳಾದ ವಿದ್ಯಾರ್ಥಿ ಯುವ ಕಾರ್ಯಕರ್ತರ ಮೇಲೆ ಯುಎಪಿಎಯಂತಹ ಕರಾಳ ಕಾನೂನನ್ನು ಹೇರಿದ ದೆಹಲಿ ಪೊಲೀಸರ ನಡೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ. ಇದು ನಾಗರಿಕ ಸ್ವಾತಂತ್ರ್ಯದ ದಬ್ಬಾಳಿಕೆ ಹಾಗೂ ಬಿನ್ನಮತೀಯರನ್ನು ಗುರಿಯಾಗಿಸುವ ತಂತ್ರ ಎಂದು ಅದು ಒತ್ತಿಹೇಳಿದೆ.
ಕೋವಿಡ್ ಲಾಕ್‌ಡೌನ್ ಬಿಕ್ಕಟ್ಟನ್ನು ದಬ್ಬಾಳಿಕೆ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ವಿದ್ಯಾರ್ಥಿ ಕಾರ್ಯಕರ್ತರನ್ನು ತಪ್ಪಾಗಿ ಬಿಂಬಿಸಿ ಸಾಂವಿಧಾನಿಕ ಹಕ್ಕುಗಳ ಹಗರಣದ ಮಾರ್ಗವನ್ನಾಗಿ ಬಳಸುತ್ತಿರುವ ದೆಹಲಿ ಪೊಲೀಸರ ನಡೆಯನ್ನು ವೆಲ್ಫೇರ್ ಪಾರ್ಟಿ ರಾಷ್ಟ್ರಾಧ್ಯಕ್ಷ ಡಾ.ಎಸ್‌.ಕ್ಯೂ.ಆರ್‌. ಇಲ್ಯಾಸ್ ಕಠಿಣ ಶಬ್ದಗಳಿಂದ ವಿರೋಧಿಸಿದ್ದಾರೆ.

ಕೋಮು ವಿಷ ಬೀಜ ಬಿತ್ತಿ ಹಿಂಸೆಗೆ ಪ್ರಚೋದಿಸುತ್ತಿರುವ ಧಾರಾಳ ಸಾಕ್ಷ್ಯಾಧಾರಗಳು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಇದ್ದರೂ ಕಾನೂನಿನ ಕಠಿಣ ಶಿಕ್ಷೆಗೆ ಅರ್ಹರಾದ ಈ ಸಮಾಜ ಘಾತುಕ ಶಕ್ತಿಗಳು ರಾಜಕೀಯ ಪ್ರಾಬಲ್ಯದಿಂದ ನಿರಾಳವಾಗಿರುವುದು ಆತಂಕದ ಬೆಳವಣಿಗೆ ಎಂದು ಖೇದ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿರುವ ರಾಜಧಾನಿ ದೆಹಲಿ ಪೊಲೀಸರು ಕಾನೂನಿನ ಎಲ್ಲಾ ಮೇರೆಯನ್ನು ಮೀರಿ ದೆಹಲಿಯನ್ನು ಪೊಲೀಸ್ ರಾಜ್ಯವಾಗಿ ಬದಲಾಯಿಸಿರುವುದು ಹಾಗೂ ನೈಜ ಅಪರಾದಿಗಳನ್ನು ರಕ್ಷಿಸಲು ಒಟ್ಟು ಪ್ರಕರಣವನ್ನು ತಪ್ಪಾಗಿ ನಿರೂಪಿಸುವ ಪೊಲೀಸರ ಕ್ರಮದ ಬಗ್ಗೆ ವಿಷಾದ ವ್ಯಕ್ತಪಡಿಸಿದರು .
ಉತ್ತರ ದೆಹಲಿಯಲ್ಲಿ ನಡೆದ ಮತೀಯ ಗಲಬೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ಜೆ ಎನ್ ಯು ಹಳೆವಿದ್ಯಾರ್ಥಿ ಡಾ. ಉಮರ್ ಖಾಲಿದ್ ಹಾಗೂ ಜಾಮಿಯಾ ವಿದ್ಯಾರ್ಥಿ ಮೀರಾನ್ ಹೈದರ್ ಮತ್ತು ಸಫೂರಾ ಝಾರ್ಗರ್ ಅವರ ವಿರುದ್ಧ ಯುಎಪಿಎ ಹೇರಿರುವುದನ್ನು ಅವರು ಬೊಟ್ಟು ಮಾಡಿದರು.

ದೇಶದ ಎಲ್ಲಾ ಶಾಂತಿಪ್ರಿಯ ನಾಗರಿಕರು, ರಾಜಕೀಯ ಪಕ್ಷಗಳು, ನ್ಯಾಯಾಂಗ ವ್ಯವಸ್ಥೆ ಹಾಗೂ ಮಾಧ್ಯಮಗಳು ಅನೀತಿ ಅನ್ಯಾಯ, ದಬ್ಬಾಳಿಕೆಯ ವಿರುದ್ದ ಒಗ್ಗಟ್ಚಾಗಿ ಕೇಂದ್ರದ ಬಿಜೆಪಿ ಸರಕಾರವನ್ನು ಎಲ್ಲಾ ರೀತಿಯ ದಬ್ಬಾಳಿಕೆ ಹಾಗೂ ಕಿರುಕುಳವನ್ನು ನಿಲ್ಲಿಸುವಂತೆ, ಭಿನ್ನಮತೀಯರ ಮೇಲೆ ಹೊರಿಸಿರುವ ಆರೋಪಗಳನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಬೇಕೆಂದೂ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *