ಬೀದಿ ನಾಯಿಗಳ ಮಾರಣ ಹೋಮ ಪಾಲಿಕೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರ್ಗಿ
ಮಹಾನಗರ ಪಾಲಿಕೆಯ ವಾರ್ಡ್​ ನಂಬರ್ 36ರ ವ್ಯಾಪ್ತಿಯಲ್ಲಿನ ಮೌಲಾನಾ ಕಟ್ಟಾ ಹತ್ತಿರ ಬೀದಿ ನಾಯಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿದು ವಾಹನದೊಳಗೆ ಹಾಕಿಕೊಂಡು ಮಾರಣ ಹೋಮ ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ಶ್ರೀರಾಮ್ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸೂರ್ಯಕಾಂತ್ ಸ್ವಾದಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ನ್ಯೂ ರಾಘವೇಂದ್ರ ಪೋಲಿಸ್ ಠಾಣೆಯ ಪೋಲಿಸ್ ಇನ್​ಸ್ಪೆಕ್ಟರ್ ಅವರಿಗೆ ದೂರೂ ಸಲ್ಲಿಸಿರುವ ಅವರು, ನಗರದಲ್ಲಿನ ಬೀದಿ ನಾಯಿಗಳ ನಿಯಂತ್ರಣ ಹೆಸರಿನಲ್ಲಿ ಮಹಾನಗರ ಪಾಲಿಕೆಯು ಬೀದಿ ನಾಯಿಗಳಿಗೆ ಅತ್ಯಂತ ಕ್ರೂರವಾಗಿ ಹೊಡೆಯುತ್ತ, ತಂತಿ ಹಾಕಿಎಳೆಯುತ್ತ, ಬಿದಿರು ಬಡಿಗೆ ಬಳಸಿ ನಾಯಿಗಳಿಗೆ ಹೊಡೆಯುತ್ತ ಅಮಾನವೀಯ ಮತ್ತು ಕ್ರೌರ​್ಯವಾಗಿ ಹಿಂಸೆ ನೀಡುತ್ತಿರುವ ಮಹಾನಗರ ಪಾಲಿಕೆಯ ಎಸ್​ಐ ಹಾಗೂ ದಿನಗೂಲಿ ಕೂಲಿ ಕಾರ್ಮಿಕರನ್ನು ಬಳಸಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಾಹನ ಕೆಎ – 32-28-1458ರಲ್ಲಿ ಅಕ್ರಮವಾಗಿ ಬೀದಿ ನಾಯಿಗಳನ್ನು ಹಿಡಿದು ನಗರದ ಹೊರಕ್ಕೆ ಸಾಗಿಸಿ ಆ ನಾಯಿಗಳನ್ನು ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂಸಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಆಯುಕ್ತರ, ಪಶು ವೈದ್ಯಾಧಿಕಾರಿ, ಆರೋಗ್ಯಾಧಿಕಾರಿ, ಪರಿಸರ ಅಧಿಕಾರಿ ಹಾಗೂ ವಾಹನದ ತಂಡದ ಲೀಡರ್ ಎಸ್​ಐ ಮತ್ತು ಐದರಿಂದ ಆರು ಜನ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಪಾಲಿಕೆಯ ಅಧಿಕಾರಿಗಳಿಂದ ತಿಳಿದುಬಂದಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದರಿಯವರ ವಿರುದ್ಧ ಪ್ರಿವೆಂಟ್ಷನ್ ಆಫ್ ಕ್ಯೂರಾಲಿಟಿ ಟು ಎನಿಮಲ್ ಆಕ್ಟ್​ 1960 ಯು/ ರೂಲ್ 11ಸಿ, ಐಪಿಸಿ 429 ಕಾಯ್ದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಗೊಂಡು ಪ್ರಾಣಿಪ್ರಿಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಪ್ರಕರಣ ದಾಖಲಿಸಲು ವಿಳಂಭ ಮಾಡಿದಲ್ಲಿ ಮೇಲಾಧಿಕಾರಿಗಳವರ ಒತ್ತಡಕ್ಕೆ ಒಳಗಾದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *