ದಾಳಿಂಬೆಗೆ ಮೋತ್ ಕೀಟ ಬಾಧೆ ತಪ್ಪಿಸಲು ತೋಟಕ್ಕೆ ಎಲ್ಇಡಿ ಬಲ್ಬ..!

ಲಿಂಗಸುಗೂರು
ದಾಳಿಂಬೆ ಹಣ್ಣಿಗೆ ಕಾಡುವ ಮೋತ್ ಕೀಟದಿಂದ ಹಣ್ಣನ್ನು ರಕ್ಷಿಸಲು ಪ್ರತಿ ಗಿಡಕ್ಕೂ ಎಲ್ಇಡಿ ವಿದ್ಯುತ್ ದೀಪಗಳನ್ನು ಹಾಕುವ ಮೂಲಕ ಇಲ್ಲಿನ ರೈತರೊಬ್ಬರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ರೈತ ಬಸವರಾಜಗೌಡ ಗಣೇಕಲ್ ಅವರು ಗುಡದನಾಳ ಗ್ರಾಮದ ಬಳಿಯಿರುವ ತಮ್ಮ ನಾಲ್ಕು ಎಕರೆ ದಾಳಿಂಬೆ ತೋಟದಲ್ಲಿ ದಾಳಿಂಬೆ ಹಣ್ಣಿಗೆ ಮೋತ್ ಕೀಟಗಳ ಕಾಟದಿಂದ ಹಣ್ಣುಗಳು ಹಾಳಾಗುತ್ತಿದ್ದರಿಂದ ಹಣ್ಣುಗಳ ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿತ್ತು. ದಾಳಿಂಬೆ ಹಣ್ಣಿಗೆ ಮೋತ್ ಕೀಟ ಕತ್ತಲು ವೇಳೆಯಲ್ಲಿ ಬಂದು ಹಣ್ಣಿನ ರಸ ಹೀರಿಕೊಂಡು ಹೋಗುತ್ತಿದ್ದರಿಂದ ಎರಡು ದಿನಗಳ ನಂತರ ಹಣ್ಣು ಕೊಳೆತು ಗಿಡಗಳಿಂದ ಉದುರಿ ಬೀಳುತ್ತಿವೆ. ಇದರಿಂದ ಹಣ್ಣುಗಳು ಸಂಪೂರ್ಣ ಹಾಳಾಗಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತಾಗುತ್ತಿದೆ.
ಹೊಸ ಐಡಿಯಾ :
ಕೀಟಗಳಿಂದ ಹಣ್ಣಗಳನ್ನು ರಕ್ಷಣೆ ಮಾಡಲು ಬಸವರಾಜಗೌಡ ಅವರು ನಾಲ್ಕು ಎಕರೆಯಲ್ಲಿನ 220 ಗಿಡಗಳಲ್ಲಿ ಪ್ರತಿಯೊಂದು ಗಿಡಕ್ಕೂ 12 ವ್ಯಾಟ್ನ ಒಟ್ಟು 220 ಎಲ್ಇಡಿ ಬಲ್ಪ ಹಾಕಿ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳನ್ನು ಉರಿಸುವುದರಿಂದ ಬೆಳೆಕಿಗೆ ಕೀಟ ಬರುವದಿಲ್ಲ ಎಂಬ ವಿಶ್ವಾಸದ ಮೇರಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಳೆದ ಎಂಟು ದಿನಗಳಿಂದ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಸಂಜೆ 6ರಿಂದ ಬೆಳಿಗ್ಗೆ 6ವರಿಗೆ ಜಮೀನಿನಲ್ಲಿ ವಿದ್ಯುತ್ ದೀಪಗಳು ಕಂಗಗೊಳಿಸುತ್ತಿವೆ. ಮೋತ್ ಎಂಬ ಕೀಟದ ಆಯುಸ್ಸು ಕೇವಲ ಒಂದೂವರೆ ತಿಂಗಳಿಂದ ಎರಡು ತಿಂಗಳು ಮಾತ್ರ ಇರುತ್ತಿದೆ. ಈ ಹಿನ್ನಲೆಯಲ್ಲಿ ಚಳಿಗಾಲ ಆರಂಭದವರಿಗೂ ತೋಟದಲ್ಲಿ ಕೀಟಗಳ ಕಾಟದಿಂದ ಪಾರಾಗಲು ಬೆಳಿಕಿನ ವ್ಯವಸ್ಥೆ ಅಗತ್ಯವಾಗಿದೆ. ಕಳೆದ ಎಂಟು ದಿನಗಳಿಂದ ದೀಪಗಳನ್ನು ಉರಿಸುವುದರಿಂದ ಕೀಟ ಬಾಧೆ ನಿಯಂತ್ರಣಕ್ಕೆ ಬಂದಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
“ ಮೋತ್ ಕೀಟ ಕಾಟ ತಪ್ಪಿಸಲು ಹಣ್ಣಗಳನ್ನು ರಕ್ಷಿಸಿಕೊಳ್ಳಲು ನಮ್ಮ ತೋಟಕ್ಕೆ ಎಲ್ಇಡಿ ವಿದ್ಯುತ್ ದೀಪಗಳಿಂದ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ” – ಬಸವರಾಜಗೌಡ ಗಣೇಕಲ್, ರೈತ ಲಿಂಗಸುಗೂರು.
“ ದಾಳಿಂಬೆ ಹಣ್ಣಿಗೆ ಈಗ ಉತ್ತಮ ರೇಟು ಇದೆ. ರೈತರು ಹಣ್ಣಿಗೆ ಕೀಟ ಬಾಧೆ ತಪ್ಪಿಸಲು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಕೊಂಡಿರುವುದು ಇದೇ ಮೊದಲು. ಶೇ.80 ರಷ್ಟು ಕೀಟ ನಿಯಂತ್ರಣಕ್ಕೆ ಬರುತ್ತಿದೆ ” – ಯೋಗೇಶ್ವರ, ತೋಟಗಾರಿಕೆ ಸಹಾಯಕ ನಿರ್ದೇಶಕರು ಲಿಂಗಸುಗೂರು.
ಪೋಟೋ 01ಎಲ್ಎನ್ಜಿ01 ಲಿಂಗಸುಗೂರು ಪಟ್ಟಣದ ಗುಡದನಾಳ ರಸ್ತೆಯಲ್ಲಿರುವ ದಾಳಿಂಬೆ ತೋಟದಲ್ಲಿ ಪ್ರತಿ ಗಿಡಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿರುವುದು.

Leave a Reply

Your email address will not be published. Required fields are marked *