
ಕೊಪ್ಪಳ
ಜಿಲ್ಲಾದ್ಯಂತ ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗುತ್ತಿವೆ.
ಸತತ ಮಳೆಯಿಂದ ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ವ್ಯಕ್ತಿಯೊಬ್ಬ ಪತ್ನಿಯನ್ನು ಎತ್ತಿಕೊಂಡು ಹಳ್ಳ ದಾಟಿದ್ದಾನೆ.
ಇನ್ನು ಈ ದಂಪತಿ ಸಹಾಯ ಮಾಡಲು ಅವರ ಮಗುವನ್ನು ಎತ್ತಿಕೊಂಡು ಹೋಗಿದ್ದ ಸ್ಥಳೀಯ ಯುವಕ ಆಯ ತಪ್ಪಿ ಹಳ್ಳಕ್ಕೆ ಬೀಳುವ ದೃಶ್ಯ ಮೈ ಜುಮ್ ಎನ್ನುವಂತಿದೆ.
ಎರಡು ಗ್ರಾಮಗಳ ಜನರಿಗೆ ಹಳ್ಳದ ದಾರಿ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ.
ಆದರೆ ಸತತ ಮಳೆಯಿಂದ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದು, ಜನರು ಅಪಾಯವನ್ನು ಲೆಕ್ಕಿಸದೇ ಸಂಚರಿಸುತ್ತಿದ್ದಾರೆ. ಈ ಸ್ಥಳದಲ್ಲಿ ಎತ್ತರದ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ..