ಕೊರೋನಾದಿಂದ ತತ್ತರಿಸಿದ ಮಾಜಿ ಸಚಿವ ಕುಸ್ತಿಪಟು ಬೆಳಮಗಿ ಕಣ್ಣೀರು…!

ಕಲಬುರ್ಗಿ
ಅದು ಕೇವಲ ಜ್ವರ… ಏನೂ ಆಗದು ಎಂಬ ಮಹಾ ಮೂರ್ಖರಿಗೆ ಇಲ್ಲಿದೆ ಒಂದು ಮೈನಡುಗಿಸುವಂತಹ ಸುದ್ದಿ… ಪೈಲ್ವಾನರನ್ನೇ ಚಿತ್ ಮಾಡಿದ್ದ ಕುಸ್ತಿ ಪಟು, ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರು ಈಗ ಕೊರೋನಾ ಸೋಂಕಿಗೆ ಒಳಗಾಗಿ ಗುಣಮುಖರಾದರೂ ಸಹ ಉಸಿರಾಟದ ತೊಂದರೆಯಿಂದಾಗಿ ಹಾಸಿಗೆಯ ಮೇಲೆ ಕಣ್ಣೀರು ಕೋಡಿಯನ್ನೇ ಹರಿಸುತ್ತಿದ್ದಾರೆ.
ಕೊರೋನಾ ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರಿಗೆ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಆಕ್ಸಿಜನ್ ನೆರವಿನೊಂದಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ನನಗೆ ಬಂದಿರುವ ಕಷ್ಟ ಯಾರಿಗೂ ಬರಬಾರದು ಎಂದು ಕುಸ್ತಿ ಪಟು ರೇವೂ ನಾಯಕ್ ಬೆಳಮಗಿ ಅವರು ಕಣ್ಣೀರು ಹಾಕಿದ್ದಾರೆ. ಕೊರೋನಾ ಸೋಂಕು ತಗುಲಿ ಗುಣಮುಖರಾದರೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ರೇವು ನಾಯಕ್ ಬೆಳಮಗಿ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸಿಗೆಯಲ್ಲಿಯೇ ಕಣ್ಣೀರು ಹಾಕಿದ ಅವರು, ನನಗಾಗಿದ್ದು ಮತ್ತಾರಿಗೂ ಆಗಬಾರದು. ಕೈಜೋಡಿಸಿ ಹೇಳುತ್ತೇನೆ, ಯಾರೂ ನನ್ನ ಭೇಟಿ ಮಾಡಲು ಬರಬೇಡಿ. ನಿಮ್ಮ ಆಶಿರ್ವಾದ ಇರಲಿ. ಆ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಅವರು ಕೈಮುಗಿದು ಬೇಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ನೂರಾರು ಗ್ರಾಮಗಳಲ್ಲಿ ಹತ್ತಾರು ಕುಸ್ತಿಪಟುಗಳನ್ನು ಕೆಡವಿದ ಗಂಡುಗಲಿ ಈಗ ಹಾಸಿಗೆ ಮೇಲೆ ವಿಶ್ರಾಂತಿಯಲ್ಲಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿ ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬೆಳಮಗಿಯವರು ಮನೆಗೆ ಬಂದಿದ್ದಾರೆ. ಕೊರೋನಾ ನೆಗಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರೂ ಬೆಳಮಗಿಯವರಿಗೆ ಮತ್ತೆ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಆಕ್ಸಿಜನ್ ನೆರವಿನೊಂದಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಅಭಿಮಾನಿಗಳು ಮನೆಗೆ ಬಂದು ಆರೋಗ್ಯ ವಿಚಾರಿಸುತ್ತಿದ್ದಾರೆ. ಹೀಗಾಗಿ ಯಾರೂ ಭೇಟಿಗೆ ಬರಬೇಡಿ ಎಂದು ಅವರು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
219 ಜನರಿಗೆ ಸೋಂಕು
ಜಿಲ್ಲೆಯಲ್ಲಿ ಗುರುವಾರ ಮತ್ತೆ 219 ಜನರಿಗೆ ಮಹಾಮಾರಿ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತ 17318 ಜನರಲ್ಲಿ 96 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ ಈಗ 14181ಕ್ಕೆ ಏರಿಕೆಯಾಗಿದೆ.
ಒಟ್ಟು 2760 ಸಕ್ರೀಯ ಪ್ರಕರಣಗಳಿವೆ. ಗುರುವಾರ ಸೋಂಕಿಗೆ ಯಾವುದೇ ಸಾವು ಸಂಭವಿಸಿಲ್ಲ.

Leave a Reply

Your email address will not be published. Required fields are marked *