ಕಿರುತೆರೆ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ ಇನ್ನಿಲ್ಲ

Siddharth Shukla Dies: Bigg Boss season contestant Romil Chaudhary gets  emotional on death of Actor Siddharth Shukla jagran special

ಮುಂಬೈ
ಹಿಂದಿ ಬಿಗ್ ಬಾಸ್ ನ ಹದಿಮೂರನೇ ಸರಣಿಯ ವಿನ್ನರ್, ಹಾಗೂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ 9 ಗಂಟೆಯ ಸಮಾರಿಗೆ ಹೃದಯಾಘಾತದಿಂದಾಗಿ ಅವರು ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.
ಮುಂಜಾನೆಯೇ ತೀವ್ರ ಹೃದಯಾಘಾತದಿಂದ ಬಳಲಿದ ಅವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮುಂಬೈನ ಕೂಪರ್ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹಲವಾರು ಚಿತ್ರಗಳಲ್ಲಿಯೂ ನಟಿಸಿದ್ದ ಸಿದ್ದಾರ್ಥ್ ಶುಕ್ಲಾ, ಇತ್ತೀಚೆಗೆ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ತಾಯಿ, ಇಬ್ಬರು ಸಹೋದರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅವರು ಅಗಲಿದ್ದಾರೆ. ಸಿದ್ದಾರ್ಥ್ ಅಗಲಿಕೆಗೆ ನಟ ಮನೋಜ್ ಬಾಜೇಪೇಯಿ ಸೇರಿದಂತೆ ಹಲವರು ತೀವ್ರ ಆಘಾತ ಹಾಗೂ ಶೋಕ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಸಿದ್ದಾರ್ಥ್ ಅಕಾಲಿಕ ಮರಣಕ್ಕೆ ಖಚಿತ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
‘ಜೀವನ ತುಂಬಾ ಚಿಕ್ಕದು’ ಸಿದ್ದಾರ್ಥ್ ಶುಕ್ಲಾ ಟ್ವೀಟ್ ವೈರಲ್
ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಬಿಗ್ ಬಾಸ್ 13ರ ವಿಜೇತರಾದ ಬಳಿಕ ಬ್ಯುಸಿಯಾಗಿದ್ದ ಅವರು, ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಗಳನ್ನು ಹೊಂದಿದ್ದರು. ಇದೀಗ ಅವರ ನಿಧನದ ಬಳಿಕ ಹಳೆಯ ಟ್ವೀಟ್ ವೈರಲ್ ಆಗಿದೆ.
‘ಲೈಫ್ ತುಂಬಾ ಚಿಕ್ಕದು’ ಎಂದು ಸಿದ್ದಾರ್ಥ್ ಫೆಬ್ರವರಿಯಲ್ಲಿ ಮಾಡಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ. ಈ ಹಳೆಯ ಟ್ವೀಟ್ ಅನ್ನು ಶೇರ್ ಮಾಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಟ್ವೀಟ್‌ನಲ್ಲಿ “ಇತರರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಅಥವಾ ಏನು ಯೋಚಿಸುತ್ತಾರೆ ಎಂದು ಚಿಂತಿಸಲು ಜೀವನವು ತುಂಬಾ ಚಿಕ್ಕದಾಗಿದೆ. ಜೀವನವನ್ನು ಎಂಜಾಯ್ ಮಾಡಿ. ಮಾತನಾಡುವವರಿಗೆ ಏನಾದರು ಕೊಡಿ” ಎಂದು ಹೇಳಿದ್ದರು.
ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ಧಾರ್ಥ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. ‘ಡ್ಯಾನ್ಸ್ ದಿವಾನೆ-3’ ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಜೊತೆ ಭಾಗವಹಿಸಿದ್ದರು.
ಶೆಹನಾಜ್ ಗಿಲ್ ಜೊತೆ ಸಿದ್ಧಾರ್ಥ್ ಶುಕ್ಲಾ ಪ್ರೀತಿಯಲ್ಲಿದ್ದರು ಎಂಬ ಸುದ್ದಿಯೂ ಇದೆ. ಇವರಿಬ್ಬರು ಹಲವು ವೇದಿಕೆಗಳಲ್ಲಿ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದರು. ಇಬ್ಬರ ನಡುವೆ ಪ್ರೀತಿ-ಪ್ರೇಮದ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಬಹಿರಂಗ ಪಡಿಸಿರಲಿಲ್ಲ. ಇಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ‘ಸಿದ್ನಾಜ್’ ಎಂದು ಕರೆಯುತ್ತಿದ್ದರು.
ಎರಡು ವರ್ಷಗಳ ಹಿಂದೆ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದ ಸಿದ್ದಾರ್ಥ್ ಅದ್ಭುತವಾಗಿ ಆಟವಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಬಿಗ್ ಬಾಸ್ 14ರಲ್ಲೂ ಸಿದ್ಧಾರ್ಥ್ ಅತಿಥಿಯಾಗಿ ಭಾಗಿಯಾಗಿದ್ದರು.
‘ಬಾಲಿಕಾ ವಧು’, ‘ದಿಲ್ ಸೆ ದಿಲ್ ತಕ್’ ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು, ‘ಜಲಕಾ ದಿಕ್ ಲಾಜಾ 6’, ‘ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ’ ಮತ್ತು ‘ಬಿಗ್ ಬಾಸ್ 13’ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *