ನರ್ಸರೊಬ್ಬರಲ್ಲಿ ಕೋರೋನಾ ಸೋಂಕು: ಆಸ್ಪತ್ರೆ ಮುಖ್ಯಸ್ಥರ ನಡೆಗೆ ಸಿಬ್ಬಂದಿಗಳ ಹಿಡಿಶಾಪ

ರಾಯಚೂರು
ಕೋರೊನಾ ಚಿಕಿತ್ಸೆ ಕಾರ್ಯದಲ್ಲಿ ತೊಡಗಿರುವ ಓಪೆಕ್ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಳವಾಗುತ್ತಿದೆ. ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಸಕಾಲಕ್ಕೆ ಕ್ವಾರಂಟೈನ್‌ಗೆ ಅವಕಾಶ ನೀಡದೇ ಇರುವ ಆಡಳಿತ ಕ್ರಮದಿಂದ ಸೋಂಕ ಹರಡು ಭೀತಿ ಕಾಡುವಂತಾಗಿದೆ.
ಕೋರೊನಾ ಚಿಕಿತ್ಸಾ ಕರ್ತವ್ಯಕ್ಕೆ ನಿಯುಕ್ತಿಯಾಗಿರುವ ನರ್ಸಿಂಗ್ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಂಡು ಬಂದಿರುವದು ಆಸ್ಪತ್ರೆ ಸಿಬ್ಬಂದಿಗಳು ಭಯದ ನೆರಳಿನಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಆಸ್ಪತ್ರೆಯ ಮುಖ್ಯಸ್ಥರ ನಿರ್ಲಕ್ಷ್ಯದಿಂದಾಗಿ ಕೋವಿಡ್ -19 ನಿಯಮಗಳನ್ನು ಪಾಲಿಸದೇ ಇರುವದು ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುವಂತೆ ಆಸ್ಪತ್ರೆಯ ಮುಖ್ಯಸ್ಥರು ನಿರಂತರ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕ್ವಾರಂಟೈನ್‌ಗೆ ಅವಕಾಶ ನೀಡದೇ ಇರುವದರಿಂದ ಸಮಸ್ಯೆಯಾಗಿದೆ. ಸಿಬ್ಬಂದಿಯೊಬ್ಬರು ನಿರಂತರವಾಗಿ ಕೆಲಸ ಮಾಡಿದ್ದುಹೋಂ ಕ್ವಾರಂಟೈನ್‌ಗೂ ಅವಕಾಶ ನೀಡದೇ ಇರುವದರಿಂದ ಸೊಂಕು ಕಂಡುಬಂದಿದೆ ಎಂದು ಹೇಳಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಕುಟುಂಬದವರೊಂದಿಗೆ ಸಂಪರ್ಕ ಹೊಂದಿರುವದರಿಂದ ಸೋಂಕು ವಿಸ್ತರಿಸಿಕೊಳ್ಳುವ ಭಯ ಪ್ರಾರಂಭವಾಗಿದೆ. ಓಪೆಕ್ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆಇಲ್ಲದೇ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಇರುವ ಸಾಕಷ್ಟು ದೂರುಗಳಿದ್ದರೂ ಕ್ರಮವಾಗದೇ ಇರುವದರಿಂದ ಆಸ್ಪತ್ರೆ ಮುಖ್ಯಸ್ಥರು ಆಡಿದ್ದೇ ಆಟ ಎನ್ನುವಂತಾಗಿದೆ. ಆಸ್ಪತ್ರೆಯಲ್ಲಿ ಆಗುತ್ತಿರುವ ಅವಾಂತರಗಳು ಜಿಲ್ಲಾಡಳಿತದ ಗಮನಕ್ಕೆ ಬಾರದೇ ಇರುದವರಿಂದ ಅವ್ಯವಸ್ಥೆ ಸರಿಪಡಿಸುವ ಕಾರ್ಯವೂ ನಡೆಯುತ್ತಿಲ್ಲ.
ಸ್ಟಾಫ್ ನರ್ಸ ಒಬ್ಬರಲ್ಲಿ ಸೋಂಕು ಕಂಡು ಬಂದಿರುವ ಕುರಿತು ಸಿಬ್ಬಂದಿಗಳಿಗೆ ಮಾಹಿತಿ ದೊರೆಕಿದ್ದು ಚಡಪಡಿಕೆ ಪ್ರಾರಂಭವಾಗಿದೆ. ಪ್ರಥಮಮತ್ತು ದ್ವಿತೀಯ ಸಂಪರ್ಕಹೊಂದಿದವರ ಪತ್ತೆ ಕಾರ್ಯ ನಡೆಯಬೇಕಿದೆ. ಆದರೆ ಐಸೋಲೇಷನ್ ವಾರ್ಡಿಗೆ ನರ್ಸ ಇವರನ್ನು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *